ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ಅಸಕ್ತಿ ಕರ ಮಾಹಿತಿ

ಅತ್ಯುನ್ನತ ರಾಜಗೋಪುರ ಹೊಂದಿರುವ ದೇವಾಲಯಗಳು ಕೆಲವೇ ಕೆಲವುಗಳಲ್ಲಿ ಈ ದೇವಸ್ಥಾನವು ಒಂದಾಗಿದೆ. ರಾಜಗೋಪುರದಿಂದ ಗಣಪತಿಯ ಸನ್ನಿಧಾನ ಬೇರೆಲ್ಲೂ ಇಲ್ಲವೆನ್ನಬಹುದು.

ಈ ದೇವಾಲಯವು ಹಾರಿಟ್, ಗೋಪುರ, ಗಾಜಿನ ವಿನ್ಯಾಸಗಳ ಅದ್ಭುತ ಕಲೆ, ಫಂಕ್ಷನ್ ಹಾಲ್ ಮತ್ತು ಹೆಚ್ಚಿನವುಗಳಿಗೆ ಜನಪ್ರಿಯವಾಗಿದೆ

ರಾಜ್ಯ ಹೆದ್ದಾರಿಯಲ್ಲಿನ ಈ ರಾಜಗೋಪುರದ ವೈಭವದ ನಡುವೆ ಭಕ್ತರನ್ನು ಹರಸುತ್ತಿರುವ ಸಿದ್ಧಿವಿನಾಯಕನ ದರ್ಶನ ಪಡೆದು ಭಕ್ತರು ಧನ್ಯತೆ ಅನುಭವಿಸುತ್ತಿದ್ದಾರೆ.

ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ

ಅಗಸ್ತ್ಯಋಷಿ ಮುನಿಗಳ ಕಲ್ಯಾಣಿ ತೀಥ೯ವನ್ನೂ, ಜಡೇ ಕಲ್ಲು,ಗಣೇಶ ಪ್ರದಶಿ೯ನಿ,ಬೆಳ್ಳಿ ರಥ,ಬೆಳ್ಳಿ ಪಲ್ಲಕ್ಕಿ, ಸುಂದರ ಹಾಗೂ ದಪ೯ಣಕಲೆಯ ವೈವಿಧ್ಯತೆಯ ರಾಜಗೋಪುರ ಹಾಗೂ ಯಾಗಶಾಲೆ, ನೀವು ಇಲ್ಲಿ ನೋಡಬಹುದು.

ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದರಂತೆ.

ವಿಶ್ವದ ಪ್ರಸಿದ್ಧ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಕಾರಣಗಿರಿ ಎಂಬ ಗ್ರಾಮದಲ್ಲಿದೆ.