ಇದರ ಪ್ರತೀಕವಾಗಿ ಈ ಜನಾಂಗದವರು ಕುಲದೇವತೆಯಾಗಿ ಇಂದಿಗೂ ಪೂಜೆ, ಹರಕೆ ಸಲ್ಲಿಸುವುದರ ಮೂಲಕ ಪಾವನರಾಗುತ್ತಿದ್ದಾರೆ.
ಮಕ್ಕಳ ಆರೋಗ್ಯವನ್ನು ವಿವಾಹ ಮಂಗಳಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿ ಕೊಡುತ್ತಿರುವ ಬಗ್ಗೆಯೂ ಹಲವಾರು ನಿದರ್ಶನಗಳು ಇಲ್ಲಿವೆ.
ಶ್ರೀದೇವಿಗೆ ವಿಶೇಷವಾಗಿ ಉದ್ದಿನಿಂದ ತಯಾರಿಸಿದ ಕಜ್ಜಾಯ ತುಪ್ಪ ಬೆಲ್ಲದಿಂದ ತಯಾರಿಸಿದ ಅನ್ನ ನೈವೇದ್ಯ ಬೆಣ್ಣೆ ಸೇವೆ ಇಲ್ಲಿನ ವಿಶೇಷವಾಗಿವೆ.
ಹೊಸದಾಗಿ ಮದುವೆಯಾದ ಜೋಡಿಗಳಂತೂ ಕಡ್ಡಾಯವಾಗಿ ಅಮ್ಮನ ದರ್ಶನವನ್ನು ಪಡೆಯಲೇಬೇಕೆಂಬ ನಿಯಮ ದೀವರ ಜನಾಂಗದ ನಂಬಿಕೆಯಾಗಿದೆ