ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ಬಗ್ಗೆ ಮಾಹಿತಿ | Sri Siddivinayaka Temple Karanagiri Information in Kannada
Connect with us

Information

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ಬಗ್ಗೆ ಮಾಹಿತಿ |Sri Siddivinayaka Temple Karanagiri Information in Kannada

Published

on

Sri Siddivinayaka Temple Karanagiri Information in Kannada

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ಇತಿಹಾಸ ಮಾಹಿತಿ sri siddivinayaka temple information karanagiri shimoga

Contents

Sri Siddivinayaka Temple Karanagiri

Siddivinayaka Temple Karanagiri Information in Kannada

ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಾಲಯವು ವಿಶ್ವದ ಪ್ರಸಿದ್ಧ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಕಾರಣಗಿರಿ ಎಂಬ ಗ್ರಾಮದಲ್ಲಿದೆ.  ಈ ದೇವಾಲಯವು ಹಾರಿಟ್, ಗೋಪುರ, ಗಾಜಿನ ವಿನ್ಯಾಸಗಳ ಅದ್ಭುತ ಕಲೆ, ಫಂಕ್ಷನ್ ಹಾಲ್ ಮತ್ತು ಹೆಚ್ಚಿನವುಗಳಿಗೆ ಜನಪ್ರಿಯವಾಗಿದೆ. ಇದು ಸಾಗರ ನಗರಕ್ಕೆ 38 ಕಿಮೀ ದೂರದಲ್ಲಿದೆ. ಅತ್ಯುನ್ನತ ರಾಜಗೋಪುರ ಹೊಂದಿರುವ ದೇವಾಲಯಗಳು ಕೆಲವೇ ಕೆಲವುಗಳಲ್ಲಿ ಈ ದೇವಸ್ಥಾನವು ಒಂದಾಗಿದೆ. ರಾಜಗೋಪುರದಿಂದ ಗಣಪತಿಯ ಸನ್ನಿಧಾನ ಬೇರೆಲ್ಲೂ ಇಲ್ಲವೆನ್ನಬಹುದು. ಭಕ್ತರರೊಬ್ಬರ ಮನದಭೀಷ್ಠ ನೆರವೇರಿದ ಕಾರಣ ಇತ್ತೀಚೆಗೆ ರಾಜಗೋಪುರ ನಿರ್ಮಾಣಗೊಂಡದೆ.

ಇಲ್ಲಿನ ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ. ಈಗ ಎರಡು ವರ್ಷಗಳ ಹಿಂದೆ ಇಲ್ಲಿನ ಸ್ಥಳಿಯರಾದ ಬೆಂಗಳೂರಿನ ಹೈಕೋರ್ಟಲ್ಲಿ ವಕೀಲಿ ವೃತ್ತಿ ನಡೆಸುತ್ತಿರುವ ಗಂಗಾಧರ ಐತಾಳ ಒಂದು ಕೋಟಿ ರೂ.ವೆಚ್ಚದಲ್ಲಿ ೧೦೦ ಅಡಿ ಎತ್ತರದ ರಾಜಗೋಪುರ ನಿರ್ಮಿಸಿ ಹರಕೆ ಸಮರ್ಪಿಸಿದರು.

ರಾಜ್ಯ ಹೆದ್ದಾರಿಯಲ್ಲಿನ ಈ ರಾಜಗೋಪುರದ ವೈಭವದ ನಡುವೆ ಭಕ್ತರನ್ನು ಹರಸುತ್ತುರುವ ಸಿದ್ಧಿವಿನಾಯಕನ ದರ್ಶನ ಪಡೆದು ಭಕ್ತರು ಧನ್ಯತೆ ಅನುಭವಿಸುತ್ತಿದ್ದಾರೆ. ಅತ್ಯಂತ ಕಾರಣೀಕ ಕ್ಷೇತ್ರವಾದ ಕಾರಣಗಿರಿ ಕ್ಷೇತ್ರ ಕೇವಲ ಒಂದು ದೇವಸ್ಥಾನವಾಗಿ ಮಾತ್ರವೇ ಅಲ್ಲ ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಬಂದ ಭಕ್ತರನ್ನ ಗೌರವಿಸುವ ವಿಚಾರದಲ್ಲಿಯೂ ಹಾಗೂ ಶುಚಿ-ರುಚಿಯಲ್ಲಿ ನೂರು ಹೆಜ್ಜೆ ಮುಂದಿದೆ ಎಂದು ಹೇಳಬಹುದು. ಕಾರಣಗಿರಿ ದೇವಸ್ಥಾನಕ್ಕೆ ಬಂದ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿಲ್ಲ ಎಂದರೆ ಆ ಯಾತ್ರೆ ಪರಿಪೂಣ೯ವಾಗಿಲ್ಲ ಎನ್ನುತ್ತಾರೆ ಭಕ್ತರು.

ಅಗಸ್ತ್ಯಋಷಿ ಮುನಿಗಳ ಕಲ್ಯಾಣಿ ತೀಥ೯ವನ್ನೂ, ಜಡೇ ಕಲ್ಲು,ಗಣೇಶ ಪ್ರದಶಿ೯ನಿ,ಬೆಳ್ಳಿ ರಥ,ಬೆಳ್ಳಿ ಪಲ್ಲಕ್ಕಿ, ಸುಂದರ ಹಾಗೂ ದಪ೯ಣಕಲೆಯ ವೈವಿಧ್ಯತೆಯ ರಾಜಗೋಪುರ ಹಾಗೂ ಯಾಗಶಾಲೆ, ನೀವು ಇಲ್ಲಿ ನೋಡಬಹುದು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇತಿಹಾಸ :

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇತಿಹಾಸ

ಪುರಾಣ ಕಾಲದಲ್ಲಿ ಅಗಸ್ತ್ಯ ಮಹರ್ಷಿಗಳು ಈ ಸ್ಥಳದಲ್ಲಿ ಬಹುಕಾಲ ನೆಲೆಸಿದರು. ಈಗಿನ ದೇಗುಲದ ಎದುರಿನ ವರಸಿದ್ಧಿವಿನಾಯಕ ಸ್ವಾಮಿಯ ವಿಗ್ರಹವನ್ನಿಟ್ಟು ಆರಾಧಿಸಿದ್ದರು ಎಂಬ ಇತಿಹಾಸವಿದೆ. ನಂತರ ಮೇಲ್ಭಾಗಕ್ಕೆ ತಂದು ಈಗಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ನಾಂದಿ ಹಾಕಿಕೊಟ್ಟರಂತೆ. ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದರಂತೆ. ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೊಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ.

ರಾವಣಾದಿಗಳನ್ನು ಮರ್ದಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುವ ಸಂತಸದಲ್ಲಿ ಇದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತನು. ಮುಂದಕ್ಕೆ ಪ್ರಯಾಣಿಸುತ್ತಿದ್ದಂತೆ ಶ್ರೀರಾಮ ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟಅಡ್ಡ ನಿಂತಿತು. ಆಗ ಶ್ರೀರಾಮನು ಕಾರಣಗಿರಿ ಈ ಬೆಟ್ಟ ಅಡ್ಡವೇಕೆ ಎಂದನಂತೆ. ಆಗ ಜೊತೆಗಿದ್ದ ಲಕ್ಷ್ಮಣ ಅಗಸ್ತ್ಯರ ಮಾತನ್ನು ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ. ನಂತರ ಶ್ರೀರಾಮ ಸೀತ ಸಹಿತನಾಗಿ ಬಂದು ಈ ದೇವರಿಗೆ ಪೂಜೆ ಸಲ್ಲಿಸಿ ಮುಂದೆ ಪ್ರಯಾಣ ಬೆಳೆಸಿ ೨ ಕಿ.ಮೀ.ದೂರದ ಸ್ಥಳದಲ್ಲಿ ಶ್ರೀರಾಮಚಂದ್ರಾಪುರದಲ್ಲಿ ವಿಶ್ರಾಂತಿಗೆ ಉಳಿದನು. ಆತ ತಂಗಿದ್ದ ಆ ಸ್ಥಳ ಶ್ರೀರಾಮಚಂದ್ರಾಪುರ ಎಂದು ಪ್ರಸಿದ್ಧವಾಯಿತು. ಶಂಕಾರಾಚಾರ್ಯರ ಶಿಷ್ಯರಿಂದ ಈ ಸ್ಥಳದಲ್ಲಿ ಮಠ ಸ್ಥಾಪನೆಯಾಗಿ ಈಗ ಶ್ರೀರಾಮಚಂದ್ರಾಪುರ ಮಠ ಕೂಡ ಪ್ರಸಿದ್ಧಿಯಾಗಿದೆ.

ಇತ್ತೀಚೆಗೆ ವರ್ಷಾನುವರ್ಷ ಸತತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಈ ದೇಗುಲ ದಿನಪ್ರತಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಪ್ರತಿ ಸಂಕಷ್ಟಿಯಂದು ಕಾಯಿಗಳಿಗೆ ಕಡಿಮೆಯಿಲ್ಲದಷ್ಟು ಸಾಮೂಹಿಕ ಗಣ ಹೋಮ ನಡೆಯುತ್ತದೆ. ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಮಂಗಲ.ರಾಮಾಯಣ ಪಾರಾಯಣ, ಏಕಾದಶ ರುದ್ರಾಭಿಷೇಕ, ಭಜನೆ, ಸಂತರ್ಪಣೆ,ಹಾಗೂ ಸಂಜೆ ಭಜನೆ,ಅಷ್ಟಾವದಾನ ಸೇವೆಗಳು ನಡೆಯುತ್ತದೆ. ದೇಗುಲದ ಆವರಣದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವಿದ್ದು ಹಲವು ಶುಭ ಸಮಾರಂಭಗಳು ನಡೆಯುತ್ತದೆ. ದೇಗುಲದ ಸುತ್ತಲೂ ಸುಮಾರು ೫೦ ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಚಂದ್ರಶಾಲೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ತಲುಪುವುದು ಹೇಗೆ?

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ತಲುಪುವುದು

ರಸ್ತೆ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ, ತುಮಕೂರು, ಅರಸೀಕೆರೆ, ಬಾಣಾವರ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ ಮೂಲಕ ರಾಷ್ಟ್ರೀಯ ಹೆದ್ದಾರಿ, NH-206 ಮೂಲಕ ಕಾರು ಅಥವಾ ಬಸ್ ಮೂಲಕ ಶಿವಮೊಗ್ಗವನ್ನು ರಸ್ತೆಯಲ್ಲಿ ತಲುಪಬಹುದು. ಕೆಎಸ್‌ಆರ್‌ಟಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇತ್ತೀಚೆಗೆ ವೋಲ್ವೋ ಬಸ್‌ಗಳನ್ನು ಪರಿಚಯಿಸಿದೆ

ಇದು ಬೆಂಗಳೂರಿನಿಂದ ಶಿವಮೊಗ್ಗವನ್ನು ತಲುಪಲು ಆರಾಮದಾಯಕ ಆದರೆ ದುಬಾರಿ ಮಾರ್ಗವಾಗಿದೆ. ಬೆಂಗಳೂರಿನಿಂದ ಶಿವಮೊಗ್ಗ ರಸ್ತೆಯಲ್ಲಿ ಸುಮಾರು 274 ಕಿಮೀ ದೂರದಲ್ಲಿದೆ. 

ರೈಲು ಮೂಲಕ ತಲುಪಲು ಶಿವಮೊಗ್ಗ ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಬೆಂಗಳೂರು ಮತ್ತು ಮೈಸೂರಿನಿಂದ ಶಿವಮೊಗ್ಗಕ್ಕೆ ರೈಲುಗಳು ಚಲಿಸುತ್ತವೆ. ಭಾರತದ ಇತರ ಭಾಗಗಳಿಂದ ಶಿವಮೊಗ್ಗಕ್ಕೆ ನೇರ ರೈಲುಗಳು ಅಸ್ತಿತ್ವದಲ್ಲಿಲ್ಲ ಅಥವಾ ವಿರಳವಾಗಿರುತ್ತವೆ. ರೈಲಿನ ಮೂಲಕ ಭಾರತದ ಹೆಚ್ಚಿನ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಬೀರೂರು ಜಂಕ್ಷನ್ ಶಿವಮೊಗ್ಗದಿಂದ ಸರಿಸುಮಾರು 70 ಕಿಮೀ ದೂರದಲ್ಲಿದೆ ಮತ್ತು ಶಿವಮೊಗ್ಗವನ್ನು ತಲುಪಲು ಪರ್ಯಾಯವಾಗಿ ಬಳಸಬಹುದು

ಶಿವಮೊಗ್ಗದಿಂದ ಹೊನ್ನಾವರ್ ಮತ್ತು ಕೊಂಕಣ ಪ್ರದೇಶದಲ್ಲಿ ಗೋವಾವನ್ನು ಸಂಪರ್ಕಿಸುವ ರೈಲು ಮಾರ್ಗಗಳು ಬೆಂಗಳೂರಿನಿಂದ ಗೋವಾಕ್ಕೆ ಇದು ಅತ್ಯಂತ ಕಡಿಮೆ ಮಾರ್ಗವಾಗಿದೆ.

ವಿಮಾನದ ಮೂಲಕ  ತಲುಪಲು ಶಿವಮೊಗ್ಗ ನಗರದಿಂದ 6 ಕಿಮೀ ದೂರದಲ್ಲಿರುವ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದೆ. ಬೆಂಗಳೂರು 275 ಕಿಮೀ, ಮಂಗಳೂರು (180 ಕಿಮೀ ಅಥವಾ ಹುಬ್ಬಳ್ಳಿ 205 ಕಿಮೀ ವಿಮಾನ ನಿಲ್ದಾಣಗಳನ್ನು ಶಿವಮೊಗ್ಗಕ್ಕೆ ಸಾರಿಗೆಯಾಗಿ ಬಳಸಬಹುದು.

FAQ

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ಎಲ್ಲಿದೆ?

ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಾಲಯವು ವಿಶ್ವದ ಪ್ರಸಿದ್ಧ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಕಾರಣಗಿರಿ ಎಂಬ ಗ್ರಾಮದಲ್ಲಿದೆ

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಿಶಿಷ್ಟವೇನು?

ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದರಂತೆ. ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೊಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ತಲುಪುವುದು ಹೇಗೆ?

ರಸ್ತೆ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ, ತುಮಕೂರು, ಅರಸೀಕೆರೆ, ಬಾಣಾವರ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ ಮೂಲಕ ರಾಷ್ಟ್ರೀಯ ಹೆದ್ದಾರಿ, NH-206 ಮೂಲಕ ಕಾರು ಅಥವಾ ಬಸ್ ಮೂಲಕ ಶಿವಮೊಗ್ಗವನ್ನು ರಸ್ತೆಯಲ್ಲಿ ತಲುಪಬಹುದು. ಕೆಎಸ್‌ಆರ್‌ಟಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇತ್ತೀಚೆಗೆ ವೋಲ್ವೋ ಬಸ್‌ಗಳನ್ನು ಪರಿಚಯಿಸಿದೆ

ಇತರ ಪ್ರವಾಸಿ ಸ್ಥಳಗಳು

ನಗರ ಕೋಟೆ

ಕವಲೇದುರ್ಗ ಕೋಟೆ

ಸಿಂಗಧೂರು

Latest

dgpm recruitment 2022 dgpm recruitment 2022
Central Govt Jobs7 months ago

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 | DGPM Recruitment 2022

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 ಮಾಹಿತಿ DGPM Recruitment 2022 Information In Kannada Details In Karnataka How To Apply On Online...

ಸಹಕಾರ ಮಿತ್ರ ಯೋಜನೆ 2022 ಸಹಕಾರ ಮಿತ್ರ ಯೋಜನೆ 2022
Central Govt Schemes7 months ago

ಸಹಕಾರ ಮಿತ್ರ ಯೋಜನೆ ಕೃಷಿ ಮತ್ತು ಐಟಿ ಪದವೀಧರರಿಗೆ 4 ತಿಂಗಳಲ್ಲಿ10 ಸಾವಿರ ರೂ ಹಣಕಾಸಿನ ಬೆಂಬಲ

ಸಹಕಾರ ಮಿತ್ರ ಯೋಜನೆ 2022 ಮಾಹಿತಿ Sahakar Mitra Scheme 2022 Information In Karnataka Details In Kannada How To Apply On Online...

cbse scholarship 2022 cbse scholarship 2022
Scholarship7 months ago

SSLC ಹಾಗೂ PUC ವಿದ್ಯಾರ್ಥಿಗಳಿಗೆ ರೂ 20 ಸಾವಿರ..! CBSE ವಿದ್ಯಾರ್ಥಿವೇತನ 2022

CBSE ವಿದ್ಯಾರ್ಥಿವೇತನ 2022 ಮಾಹಿತಿ CBSE Scholarship 2022 Information In Karnataka Details In Kannada How To Apply On Online Last Date...

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022 ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022
Karnataka Govt Jobs7 months ago

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Belagavi Zilla Panchayat Recruitment 2022 Information In Karnataka Details In Kannada, Last Date How...

Zilla Panchayat Recruitment 2022 Zilla Panchayat Recruitment 2022
Karnataka Govt Jobs7 months ago

ಜಿಲ್ಲಾ ಪಂಚಾಯತ್ ನೇಮಕಾತಿ 2022 | Zilla Panchayat Recruitment 2022

ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Zilla Panchayat Recruitment 2022 Information In Karnataka Details In Kannada Last Date, Salary, How To...

Trending