ಗುಳಿಗುಳಿ ಶಂಕರ ದೇವಸ್ಥಾನದ ಮಾಯಾ ಕೊಳದ ಮಾಹಿತಿ | Guli Guli Shankara Temple Information iin kannada
Connect with us

Temple

ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ ಮಾಹಿತಿ |Guli Guli Shankara Temple Information iin kannada

Published

on

Guli Guli Shankara Temple Information iin kannada

ಗುಳಿಗುಳಿ ಶಂಕರ ದೇವಸ್ಥಾನದ ಮಾಯಾ ಕೊಳದ ಮಾಹಿತಿ ವಿಸ್ಮಯ ಇತಿಹಾಸ Guli Guli Shankara information in Kannada Guli Guli Shankara Temple in Karnataka

ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ ಮಾಹಿತಿ

ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ ಮಾಹಿತಿ

Contents

ಗುಳಿಗುಳಿ ಶಂಕರ

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕೃತಿ ಸೌಂದರ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರೇಕ್ಷಣಿಕ ಸ್ಥಳಗಳಿಗೆ ಕೊರತೆಯೇ ಇಲ್ಲ ಬಿಡಿ. ಹಾಗೆಯೇ ಅನೇಕ ಪ್ರಸಿದ್ದ ಪ್ರಖ್ಯಾತ ದೇವಸ್ಥಾನಗಳು ಇಲ್ಲಿ ಕಂಡುಬರುತ್ತವೆ ಎಂಬುದು ಸುಳ್ಳಲ್ಲ. ಅದೆ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಅಭೂತಪೂರ್ವ ಶಕ್ತಿಯಿಂದ ಎಲ್ಲೆಡೆ ಕೇಳಿಬರುತ್ತಿರುವ ಸ್ಥಳದ ಹೆಸರು ಶ್ರೀ ಕ್ಷೇತ್ರ ಗುಳಿ ಗುಳಿ ಶಂಕರ ಮಾಯಾಕೊಳದ ಬಗ್ಗೆ ವಿಸ್ಮಯ ಮಾಹಿತಿಯನ್ನು ನಾವು ನೋಡಬಹುದು.

ಪ್ರಕೃತಿಯ ಸೌಂರ್ದಯ ನೋಡಿದರೂ ಮತ್ತೆ ಸುತ್ತ ನೋಡಬೇಕೆನಿಸುವ ಕೇಳಬೇಕೆನಿಸುವ ಕಲರವ ಪ್ರಕೃತಿಯ ತವರು ಸಹ್ಯಾದ್ರಿಯ ಸಿರಿಯು ಹಚ್ಚ ಹಸಿರಿನ ಸಿರಿತನ ಇದೆಲ್ಲಾ ಕಂಡು ಬರುವುದು ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ ಎನ್ನಬಹುದು.

ಈ ಕೊಳ ಕಂಡುಬರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿ ಗ ಎಂಬ ಗ್ರಾಮದಲ್ಲಿ ಈ ಕೊಳ ಕಂಡುಬರುತ್ತದೆ ಕೊಳದಲ್ಲಿ ಅನೇಕ ವಿಶೇಷತೆಗಳು ಕೂಡ ಇದೆ ಈ ಕೊಳದ ಸುತ್ತ ನೀರು ಇದೆ ಮತ್ತು ಅಲ್ಲೇ ಹತ್ತಿರದಲ್ಲಿ ಗುಳಿ ಶಂಕರ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಲಾಗಿದೆ ಅಡಿಕೆ ತೋಟಗಳ ಮಧ್ಯೆ ಈ ಕೊಳ ಇದೆ ನೋಡಲು ತುಂಬಾ ಚೆನ್ನಾಗಿದೆ ಹಾಗೂ ಅನೇಕ ಪವಾಡಗಳು ಕೂಡ ನಡೆಯುತ್ತದೆ.

ಗುಳಿಗುಳಿ ಶಂಕೇಶ್ವರ ದೇವಸ್ಥಾನ

ಗುಳಿಗುಳಿ ಶಂಕೇಶ್ವರ ದೇವಸ್ಥಾನ
ಗುಳಿಗುಳಿ ಶಂಕೇಶ್ವರ ದೇವಸ್ಥಾನ

ಗುಳಿಗುಳಿ ಶಂಕೇಶ್ವರ ದೇವಸ್ಥಾನ ಶಿವನ ಮುಖ್ಯ ದೇವತೆಯಾಗಿ ಮತ್ತು ಚೌಡೇಶ್ವರಿ ದೇವಿಯು ನಿಗೂಢ ಭಗವಂತ ಶಿವನ ದೇವಾಲಯ ಮತ್ತು ಪವಿತ್ರ ಕೊಳವಾಗಿದೆ. ನಗರದ ಅವ್ಯವಸ್ಥೆಯಿಂದ ದೂರವಿರುವ ಶಾಂತ ಮತ್ತು ಶಾಂತಿಯುತ ಸ್ಥಳದಲ್ಲಿ ಶಂಕರನಿಗೆ ಸಮರ್ಪಿತವಾದ ದೇವಾಲಯವನ್ನು ನೋಡಬಹುದು. ಈ ದೇವಾಲಯವನ್ನು ವಿಶೇಷವಾಗಿ ಜಾಥಾ ತೀರ್ಥ ಎಂದು ಕರೆಯಲಾಗುತ್ತದೆ.

ಇಲ್ಲಿ ದೇವಾಲಯದ ಸಮೀಪದಲ್ಲಿರುವ ಸ್ಪ್ರಿಂಗ್ ಬಾವಿಗಾಗಿ ಭೇಟಿ ನೀಡಲಾಗುತ್ತದೆ. ಈ ಅತೀಂದ್ರಿಯ ನೀರು ಭಕ್ತರಿಗೆ ಇಷ್ಟಾರ್ಥಗಳನ್ನು ನೀಡಲು ವಿಶೇಷವಾಗಿದೆ ಎಂದು ನಂಬಲಾಗಿದೆ.ದೇವಾಲಯದ ಆವರಣ ಮತ್ತು ಸುತ್ತಮುತ್ತ ಧನಾತ್ಮಕ ಕಂಪನಗಳು ಕಂಡುಬರುತ್ತವೆ.

ಉಚಿತವಾದ ವಿಶಾಲವಾದ ಪಾರ್ಕಿಂಗ್ ಸ್ಥಳ, ದೇವರಿಗೆ ವಿವಿಧ ವಿಶೇಷ ಪೂಜೆಗಳನ್ನು ಸಲ್ಲಿಸಬಹುದು.ಸುತ್ತಮುತ್ತಲಿನ ಚವಡೇಶ್ವರಿ ಅಮ್ಮನಿಗೆ ಸಮರ್ಪಿತವಾದ ಸಣ್ಣ ದೇವಾಲಯವನ್ನು ಸಹ ನೀವು ಕಾಣಬಹುದು.ಜಟಾ ತೀರ್ಥವು ಬೆಳಿಗ್ಗೆಯಿಂದ ಸಂಜೆಯವರೆಗೆ ತೆರೆದಿರುತ್ತದೆ.

ಇಲ್ಲಿ ಮುಖ್ಯ ದೇವಾಲಯವು ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಮುಚ್ಚಲ್ಪಡುತ್ತದೆ. ವಾರಾಂತ್ಯದಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುತ್ತದೆ. ಇದು ಕರ್ನಾಟಕದ ಅತ್ಯಂತ ಶಕ್ತಿಶಾಲಿ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಮಾಂತ್ರಿಕ ಕೊಳವನ್ನು ಹೊಂದಿದೆ. ಅದರ ಬಗ್ಗೆ ಮಾಹಿತಿಯನ್ನು ನೋಡಬಹುದು.

ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ

 ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ
ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ

ಇದು ಒಂದು ಮಯಾಕೊಳವಾಗಿದೆ. ಶಿವನ ಮುಖ್ಯ ದೇವತೆಯಾಗಿ ಮತ್ತು ಚೌಡೇಶ್ವರಿ ದೇವಿಯು ನಿಗೂಢ ಭಗವಂತ ಶಿವನ ದೇವಾಲಯ ಮತ್ತು ಪವಿತ್ರ ಕೊಳವಾಗಿದೆ. ನೀವು ಕೊಳದ ಬಳಿ ಶಬ್ದ ಮಾಡಿದರೆ ಅದು ಪ್ರತಿಕ್ರಿಯಿಸುತ್ತದೆ. ಕೆಲವು ಗುಳ್ಳೆಗಳು ಕೊಳದ ಕೆಳಗೆ ಬರುತ್ತವೆ. ಕೊಳಕ್ಕೆ ಯಾವುದೇ ನೀರಿನ ಮೂಲವಿಲ್ಲ. ಇಲ್ಲಿ ಗಂಗೆಯು ಸದಾ ಕಾಲ ಹರಿಯುವಳು ಆ ಚಿಲುಮೆಯಲ್ಲಿ ನಾವು ಅದರ ಬಳಿ ಚಪ್ಪಾಳೆ ತಟ್ಟಿದ್ದಲ್ಲಿ ನೀರಿನ ಗುಳ್ಳೆಗಳು ಗುಳಿ ಗುಳಿ ಎಂದು ಮೇಲೆ ಬರುವವು.

ಹಾಗೆಯೇ ಆ ನೀರಿನಲ್ಲಿ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಇರುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂಬ ಖ್ಯಾತಿಯನ್ನು ಪಡೆದಿದೆ ಹಾಗೆಯೇ ಮನಸಲ್ಲಿ ನಮಗೆ ಅಗಬೇಕಿರುವ ಕೆಲಸ ಅಥವಾ ಎನಾದರು ಕೋರಿಕೆಗಳು ಇದ್ದರೆ ಒಳ್ಳೆಯ ಮನಸ್ಸಿನಿಂದ ಪ್ರಾರ್ಥಿಸಿ ಬಿಲ್ವ ಪತ್ರೆಯ ಎಲೆಯನ್ನು ಮೂರು ಬಾರಿ ಮುಳುಗಿಸಿ ನಂತರ ಆ ಚಿಲುಮೆಯಲ್ಲಿ ಬಿಡಬೇಕು ಆ ಬಿಲ್ವಪತ್ರೆಯು ಕೆಳಗೆ ಹೋಗಿ ನಂತರ ಮೇಲೆ ಬರುವುದು ಅದು ಕೆಳಗೆ ಹೋಗಿ ಬೇಗ ಮೇಲೆ ಬಂದರೆ ನಾವು ಅಂದುಕೊಂಡ ಕೆಲಸ ಬೇಗ ಸಿದ್ಧಿಸುವುದು ಎಂದಾಗಿದೆ.

ಅದು ಬರುವುದು ತಡವಾದರೆ ಅಥವಾ ಬರದೆ ಇದ್ದರೆ ನಾವು ಅಂದು ಕೊಂಡಿದ್ದ ಕೆಲಸ ಫಲಿಸುವುದು ಕಷ್ಟಸಾಧ್ಯ ಅಥವ ತಡ ಆಗಬಹುದು ಎಂದು ಅರ್ಥ. ನಂತರ ಮೇಲೆ ಬಂದ ಪತ್ರೆಯನ್ನು ತೆಗೆದುಕೊಂಡು ಹೋಗಿ ದೇವಾಲಯದಲ್ಲಿ ಪೂಜೆ ಮಾಡಿಸಕೊಂಡು ಹೋಗಬೇಕು ನಂತರ ಆ ಕೆಲಸ ಸಿದ್ಧಿಸಿದ ಮೇಲೆ ಮರಳಿ ದೇವಾಲಯಕ್ಕೆ ಬಂದು ತಮ್ಮ ಕೈಲಾದ ಸೇವೆಯನ್ನು ಮಾಡಿ ಹೋದಲ್ಲಿ ಇನ್ನಷ್ಟು ಫಲ ಸಿದ್ಧಿಸುವುದು.

ಇಲ್ಲಿನ ಮಾಯಾಕೊಳ ವಿಶಿಷ್ಟವಾಗಿದೆ ಇದು ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ನೋಟ ಎಂಥವರನ್ನೂ ಬೆರುಗುಗೊಳಿಸದೆ ಇರಲಾರದು.

ಗುಳಿಗುಳಿ ಶಂಕರ ಮಾಯಾಕೊಳದ ಪುರಾಣ

ಗುಳಿಗುಳಿ ಶಂಕರ ಮಾಯಾಕೊಳದ ಪುರಾಣ
ಗುಳಿಗುಳಿ ಶಂಕರ ಮಾಯಾಕೊಳದ ಪುರಾಣ

ಹಿಂದೆ ಬೇಲೂರು-ಹಳೇಬೀಡು ಸ್ಥಳಗಳಿಗೆ ಶತ್ರುಗಳು ಆಕ್ರಮಣ ಮಾಡಿದಾಗ ಅಲ್ಲಿ ವಾಸವಿದ್ದ ಅನೇಕ ಜನರು ಬೇರೆಡೆ ವಲಸೆ ಹೋದರು. ಅಂತಹ ಒಂದು ಸಂದರ್ಭದಲ್ಲಿ ಹೊಯ್ಸಳರ ಒಂದು ಕುಟುಂಬವು ಈ ಹೊಂಡವಿರುವ ಪ್ರದೇಶಕ್ಕೆ ಬಂದು ನೆಲೆಸಿದರು.

ಹಾಗೆ ಬಂದು ನೆಲೆಸಿದವರು ಶಿವನ ಪರಮ ಭಕ್ತರಾಗಿದ್ದು, ಶಿವನಿಗೆ ಮುಡಿಪಾದ ಐದು ದೇವಾಲಯಗಳನ್ನು ಮತ್ತೆ ವಿವಿಧೆಡೆ ನಿರ್ಮಿಸಿದರು. ಅವುಗಳನ್ನು ಪಂಚಶಂಕರ ಎಂದು ಕರೆಯಲಾಗಿದೆ. ಹಾಗೆ ಪಂಚ ಶಂಕರಗಳಲ್ಲಿ ಒಬ್ಬನಾಗಿದ್ದಾನೆ ಈ ಗುಳಿ ಗುಳಿ ಶಂಕರ. ಗುಳಿ ಗುಳಿ ಶಂಕರ ಲಿಂಗವು ಪ್ರತಿಷ್ಠಾಪಿತವಾದ ಜಾಗದ ಕುರಿತು ತಿಳಿದಾಗ ಒಂದು ಕ್ಷಣ ಅಚ್ಚರಿಯಾಗದೆ ಇರಲಾರದು.

ಇನ್ನೂ ಈ ಹೊಂಡದ ಕುರಿತು ಸಾಕಷ್ಟು ರೋಚಕವಾದ ಸಂಗತಿಗಳಿವೆ. ಪ್ರಪ್ರಥಮವಾಗಿ ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ.

ಪ್ರಪ್ರಥಮವಾಗಿ ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ.

ಈ ಒಂದು ಕಾರಣದಿಂದ ಈ ನೀರು ಸಾಕಷ್ಟು ಔಷಧೀಯ ಗುಣ ಪಡೆದಿದ್ದು ಸರ್ವ ರೀತಿಯ ಚರ್ಮ ವ್ಯಾಧಿಗಳಿಗೆ, ಮೂತ್ರ ಕೋಶದ ಕಲ್ಲುಗಳಿಗೆ, ಶೀತಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಅತ್ಯಂತ ಪರಿಣಾಮಕಾರಿಯಾದ ಪರಿಹಾರ ಎಂದು ಇದರಿಂದ ಒಳಿತು ಕಂಡ ಹಲವಾರು ಭಕ್ತರ ಅಭಿಪ್ರಾಯವಾಗಿದೆ.

ಇನ್ನೂ ಈ ನೀರು ಸದಾಕಾಲ ಉಕ್ಕಿ ಹರಿಯುತ್ತಲೆ ಇರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಎಲೆಗಳನ್ನು ಹಾಕಿದಾಗ ಅವು ತೇಲುತ್ತವೆ. ಆದರೆ ಶಿವನಿಗೆ ಪ್ರೀಯವಾದ ಬಿಲ್ವ ಪತ್ರೆಯನ್ನು ಹಾಕಿದಾಗ ನಿಮ್ಮ ಭಕ್ತಿ ಶಕ್ತಿಗನುಗುಣವಾಗಿ ಅದು ಮುಳುಗುತ್ತದೆ.

ಈ ಹೊಂಡಕ್ಕೆ ಬೇರೆ ಯಾವ ಬಾಹ್ಯ ನೀರಿನ ಮೂಲಗಳಿಲ್ಲ. ಆದರೂ ಇದರಲ್ಲಿನ ನೀರು ಕಡು ಬೇಸಿಗೆಯ ಸಮಯದಲ್ಲೂ ಸದಾ ಉಕ್ಕಿ ಹರಿಯುತ್ತಿರುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ನೀರಿನ ಅಗಾಧ ಚಿಲುಮೆ. ಇದು ಸದಾ ನೀರನ್ನು ರಭಸದಿಂದ ಹೊರದಬ್ಬುತ್ತಿರುತ್ತದೆ. ಹಾಗಾಗಿ ನೀರಿನ ಗುಳ್ಳಿಗಳು ಈ ಹೊಂಡದಲ್ಲಿ ಜಿನುಗುತ್ತಿರುತ್ತವೆ. ಸಾಧ್ಯವಾದರೆ ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಡಿ .

ಗುಳಿಗುಳಿ ಶಂಕೇಶ್ವರ ದೇವಸ್ಥಾನಕ್ಕೆ ತಲುಪುಪುದು ಹೇಗೆ ?

ಬಸ್ಸ್‌ ಮೂಲಕ ತಲುಪಲು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಬ್ಬಿಗ ಗ್ರಾಮದಲ್ಲಿ ಇದು ರಿಪ್ಪನಪೇಟೆ ಇಂದ 17 ಕಿಲೋಮೀಟರ್ ದೊರದಲ್ಲಿದೆ ಅಯನೂರ್ ಇಂದ 15 ಕಿಲೋಮೀಟರ್ ದೂರದಲ್ಲಿದೆ.

ರೈಲ್‌ ಮೂಲಕ ತಲುಪಲು

ಯಾವುದೇ ಶಿವಮೊಗ್ಗ ತಲುಪುವ ರೈಲಿನ ಮೂಲಕ ತಲುಪಬೇಕು. ನಂತರ ಗುಬ್ಬಿಗ ಗ್ರಾಮಕ್ಕೆ ಬಸ್‌ ನ ಮೂಲಕ ತಲುಪಬೇಕು.

FAQ

ಗುಳಿಗುಳಿ ಶಂಕೇಶ್ವರ ದೇವಸ್ಥಾನ ಏಲ್ಲಿದೆ ?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿ ಗ ಎಂಬ ಗ್ರಾಮದಲ್ಲಿದೆ.

ಗುಳಿಗುಳಿ ಶಂಕರ ಮಾಯಾಕೊಳದ ವಿಶಿಷ್ಟವೇನು?

ನಮಗೆ ಅಗಬೇಕಿರುವ ಕೆಲಸ ಅಥವಾ ಎನಾದರು ಕೋರಿಕೆಗಳು ಇದ್ದರೆ ಒಳ್ಳೆಯ ಮನಸ್ಸಿನಿಂದ ಪ್ರಾರ್ಥಿಸಿ ಬಿಲ್ವ ಪತ್ರೆಯ ಎಲೆಯನ್ನು ಮೂರು ಬಾರಿ ಮುಳುಗಿಸಿ ನಂತರ ಆ ಚಿಲುಮೆಯಲ್ಲಿ ಬಿಡಬೇಕು ಆ ಬಿಲ್ವಪತ್ರೆಯು ಕೆಳಗೆ ಹೋಗಿ ನಂತರ ಮೇಲೆ ಬರುವುದು ಅದು ಕೆಳಗೆ ಹೋಗಿ ಬೇಗ ಮೇಲೆ ಬಂದರೆ ನಾವು ಅಂದುಕೊಂಡ ಕೆಲಸ ಬೇಗ ಸಿದ್ಧಿಸುವುದು ಎಂದಾಗಿದೆ.

ಗುಳಿಗುಳಿ ಶಂಕೇಶ್ವರ ದೇವಸ್ಥಾನಕ್ಕೆ ತಲುಪುಪುದು ಹೇಗೆ ?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಬ್ಬಿಗ ಗ್ರಾಮದಲ್ಲಿ ಇದು ರಿಪ್ಪನಪೇಟೆ ಇಂದ 17 ಕಿಲೋಮೀಟರ್ ದೊರದಲ್ಲಿದೆ ಅಯನೂರ್ ಇಂದ 15 ಕಿಲೋಮೀಟರ್ ದೂರದಲ್ಲಿದೆ.

ಇತರ ಪ್ರವಾಸಿ ಸ್ಥಳಗಳು

ಶಿವಪ್ಪ ನಾಯಕ ಅರಮನೆ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಶಿವಮೊಗ್ಗ

ಸಕ್ರೆಬೈಲು ಆನೆ ಬಿಡಾರ

Latest

dgpm recruitment 2022 dgpm recruitment 2022
Central Govt Jobs7 months ago

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 | DGPM Recruitment 2022

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 ಮಾಹಿತಿ DGPM Recruitment 2022 Information In Kannada Details In Karnataka How To Apply On Online...

ಸಹಕಾರ ಮಿತ್ರ ಯೋಜನೆ 2022 ಸಹಕಾರ ಮಿತ್ರ ಯೋಜನೆ 2022
Central Govt Schemes7 months ago

ಸಹಕಾರ ಮಿತ್ರ ಯೋಜನೆ ಕೃಷಿ ಮತ್ತು ಐಟಿ ಪದವೀಧರರಿಗೆ 4 ತಿಂಗಳಲ್ಲಿ10 ಸಾವಿರ ರೂ ಹಣಕಾಸಿನ ಬೆಂಬಲ

ಸಹಕಾರ ಮಿತ್ರ ಯೋಜನೆ 2022 ಮಾಹಿತಿ Sahakar Mitra Scheme 2022 Information In Karnataka Details In Kannada How To Apply On Online...

cbse scholarship 2022 cbse scholarship 2022
Scholarship7 months ago

SSLC ಹಾಗೂ PUC ವಿದ್ಯಾರ್ಥಿಗಳಿಗೆ ರೂ 20 ಸಾವಿರ..! CBSE ವಿದ್ಯಾರ್ಥಿವೇತನ 2022

CBSE ವಿದ್ಯಾರ್ಥಿವೇತನ 2022 ಮಾಹಿತಿ CBSE Scholarship 2022 Information In Karnataka Details In Kannada How To Apply On Online Last Date...

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022 ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022
Karnataka Govt Jobs7 months ago

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Belagavi Zilla Panchayat Recruitment 2022 Information In Karnataka Details In Kannada, Last Date How...

Zilla Panchayat Recruitment 2022 Zilla Panchayat Recruitment 2022
Karnataka Govt Jobs7 months ago

ಜಿಲ್ಲಾ ಪಂಚಾಯತ್ ನೇಮಕಾತಿ 2022 | Zilla Panchayat Recruitment 2022

ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Zilla Panchayat Recruitment 2022 Information In Karnataka Details In Kannada Last Date, Salary, How To...

Trending