Temple
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ವಿಶೇಷ ಮಾಹಿತಿ | Ammanaghatta Jenukallamma Temple Information In Kannada

Ammanaghatta Jenukallamma Temple History Information In Kannada Ammanaghatta Jenukallamma Kodur Karnataka ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಮಾಹಿತಿ ಇತಿಹಾಸ ಕರ್ನಾಟಕ
Contents
Ammanaghatta Jenukallamma Temple Information In Kannada

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ

ಮಾರುತಿಪುರ ಗ್ರಾ.ಪಂಗಳ ದಟ್ಟ ಕಾನನದ ನಡುವೆ ಬೃಹದಾಕಾರದ ಬಂಡೆಗಳ ನಡುವೆ ಕಂಗೊಳಿಸುತ್ತಿರುವ ಪ್ರಕೃತಿ ನಿರ್ಮಿತ ಏಕೈಕ ಗುಹಾಲಯವೆಂಬ ಕೀರ್ತಿಗೆ ಭಾಜನವಾದ ಅಮ್ಮನಘಟ್ಟ ಕ್ಷೇತ್ರಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಆಗ್ನೇಯ ಭಾಗದಲ್ಲಿ ಹಳೆಯ ಅಮ್ಮನಘಟ್ಟ ಪ್ರದೇಶವಿದ್ದು ಬೆಟ್ಟದ ಮುಕ್ಕಾಲು ಭಾಗ ದಕ್ಷಿಣ ದಿಕ್ಕಿನಲ್ಲಿದ್ದು ಶ್ರೀ ದೇವಿಯ ಗುಹಾಲಯಗಳಿಗೆ ಮೂಲ ವಾಸಸ್ಥಾನ ಮಾಡಿಕೊಂಡ ಬಗ್ಗೆ ಐತಿಹ್ಯವನ್ನು ಈ ಪ್ರದೇಶ ಹೊಂದಿದೆ.
ಈ ಸಾನಿಧ್ಯವನ್ನು ಜನಪದ ವರ್ಗಕ್ಕೆ ಪರಿಚಯಿಸಿದವರು ಈಡಿಗ ಜನಾಂಗದ ಪುರುಷರಾಗಿದ್ದ ಬಗ್ಗೆಯೂ ತಿಳಿದುಬಂದಿದೆ. ಇದರ ಪ್ರತೀಕವಾಗಿ ಈ ಜನಾಂಗದವರು ಕುಲದೇವತೆಯಾಗಿ ಇಂದಿಗೂ ಪೂಜೆ, ಹರಕೆ ಸಲ್ಲಿಸುವುದರ ಮೂಲಕ ಪಾವನರಾಗುತ್ತಿದ್ದಾರೆ.
ಎಲ್ಲ ಭಕ್ತರ ದುಃಖ-ದುಮ್ಮಾನ ರೋಗ-ರುಜಿನ ಸರ್ವತವುಗಳನ್ನು ನಿವಾರಿಸುತ್ತಿರುವುದೆ ಅಲ್ಲದೆ ಬೆಳೆಗಳ ರಕ್ಷಣೆ ಉತ್ತಮ ಫಸಲು ಮಕ್ಕಳ ಆರೋಗ್ಯವನ್ನು ವಿವಾಹ ಮಂಗಳಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿ ಕೊಡುತ್ತಿರುವ ಬಗ್ಗೆಯೂ ಹಲವಾರು ನಿದರ್ಶನಗಳು ಇಲ್ಲಿವೆ. ಶ್ರೀದೇವಿಗೆ ವಿಶೇಷವಾಗಿ ಉದ್ದಿನಿಂದ ತಯಾರಿಸಿದ ಕಜ್ಜಾಯ ತುಪ್ಪ ಬೆಲ್ಲದಿಂದ ತಯಾರಿಸಿದ ಅನ್ನ ನೈವೇದ್ಯ ಬೆಣ್ಣೆ ಸೇವೆ ಇಲ್ಲಿನ ವಿಶೇಷವಾಗಿವೆ.
ಈ ಸುಂದರ ಕಾರಣಿಕ ದೇಗುಲ ಇರುವುದು ಹೊಸನಗರ ತಾಲೂಕಿನ ಕೊಡೂರು ಹೋಬಳಿಯ ಜೇನುಕಲ್ಲಮ್ಮ ಬೆಟ್ಟದಲ್ಲಿದೆ. ಅಮ್ಮನವರಿರುವ ಗುಡಿಯ ಮೇಲಿನ ಬಂಡೆಯ ತುಂಬಾ ಜೇನುಗೂಡುಗಳೇ ತುಂಬಿರುತ್ತಿದ್ದುದರಿಂದ ಇದಕ್ಕೆ ಜೇನುಕಲ್ಲಮ್ಮ ಎಂಬ ಹೆಸರು ಬಂದಿದೆ.
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಇತಿಹಾಸ
ಹೊಸದಾಗಿ ಮದುವೆಯಾದ ಜೋಡಿಗಳಂತೂ ಕಡ್ಡಾಯವಾಗಿ ಅಮ್ಮನ ದರುಶನವನ್ನು ಪಡೆಯಲೇಬೇಕೆಂಬ ನಿಯಮ ದೀವರ ಜನಾಂಗದ ನಂಬಿಕೆಯಾಗಿದೆ. ಸಹಜವಾಗಿಯೇ ರಮ್ಯ ಸುಂದರ ಪ್ರಕೃತಿತಣವಾದ್ದರಿಂದ ಈಗಂತೂ ಎಲ್ಲಾ ಜನಾಂಗದ ಜೋಡಿಗಳು ಇಲ್ಲಿಗೆ ಬಂದು ದೇವಿಯ ಆಶೀರ್ವಾದವನ್ನು ಪಡೆದು ಸುಂದರ ಪರಿಸರ ಸ್ವರ್ಗದ ಸವಿ ಸವಿಯುತ್ತಾರೆ.
ಜನರ ವಿವಿಧ ಕಾಯಿಲೆಗಳಿಗೂ ದೇವಿಯ ಅನುಗ್ರಹವೇ ಸಿದ್ಧೌಷದ ಎಂದರೆ ಹೆಚ್ಚುಗಾರಿಕೆಯೇನಲ್ಲ. ಕಜ್ಜಿ – ಕುರಗಳಂತಹ ಸಾಮಾನ್ಯ ರೋಗಗಳಿಂದ ಹಿಡಿದು, ಇಂದಿನ ಆಧುನಿಕ ಪ್ರಾಣಾಹಾರಕ ಪೀಡೆಗಳೂ ಸಹಾ ಈ ಅಮ್ಮನ ಆಶೀರ್ವಾದ ಬಲದಿಂದ ಹೇಳಹೆಸರಿಲ್ಲದಂಥಾಗುತ್ತವೆ. ಅದಕ್ಕೆ ಸಾಕಷ್ಟು ಪುರಾವೆಗಳೂ ಇವೆ. ಅಡಿಕೆ ಹಿಂಗಾರ ಅಮ್ಮನ ಮೆಚ್ಚಿನ ಪುಷ್ಪ.
ಸದಾ ಮೀಸಲನ್ನೇ ಬಯಸುವ ಈ ಅಮ್ಮನನಿಗೆ ದುಂಬಿ ಸಹಾ ಮುಟ್ಟದ ಹಿಂಗಾರದ ಅರ್ಪಣೆ ಬಹುಪ್ರಿಯವಂತೆ. ಮದುವೆಗಾಗಿ ಗಂಡು ಹೆಣ್ಣಿನ ಜಾತಕ ಅಥವಾ ತಾರಾಬಲನೋಡಿ ಸಿಷ್ಕರ್ಶಿಸುವುದು ರೂಢಿ. ಆದರೆ ಈ ಅಮ್ಮನ ಭಕ್ತರು ಅದರಲ್ಲಿಯೂ ದೀವರು ಮಾತ್ರ ಅದೆಷ್ಟೇ ಜಾತಕಫಲ ಕೂಡಲಿ ತಾರಾಬಲ ಹೊಂದಲಿ, ಇಲ್ಲಿ ಪ್ರಸಾದ ತೆಗೆಸದೆ ಮದುವೆ ನಡೆಸುವುದೇ ಅಪರೂಪವಾಗಿದೆ.
ಸಂಪ್ರೀತಳಾದ ದೇವಿ ಪಡೆಯುವ ಹರಕೆಯಲ್ಲಿಯೂ ಹತ್ತುಹಲವು ವೈವಿಧ್ಯಗಳಿವೆ. ಬೆಳ್ಳಿ, ದನ-ಕರ ಬೆಣ್ಣೆ ಒಪ್ಪಿಸುವುದು ಉಡಿ ತುಂಬುವುದು. ಬೆಳ್ಳಿ ತೊಟ್ಟಿಲಲ್ಲಿ ಚಿನ್ನದ ಮಗು ಒಪ್ಪಿಸುವುದು ನೂರಾರು ವಿಧಗಳಿವೆ.
ಸದಾ ಶುಚಿತ್ವ ಮೀಸಲನ್ನು ಇಷ್ಟಪಡುವ ಈ ದೇವಿ ಯಾವುದೇ ತರಹದ ಅಶುಚಿ ಮುಟ್ಟು-ಮೈಲಿಗೆಯನ್ನು ಸಹಿಸಳು. ಆದರೆ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯುಂಟು. ತಿಳಿದೂ ಮಾಡಿದರೆ ಮಾತ್ರ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ದಂತಕಥೆ

ಜೇನುಕಲ್ಲಮ್ಮ ಗುಡಿಯ ಎದುರಿನಲ್ಲಿ ದೊಡ್ಡದೊಂದು ಗುಡ್ಡ ಕಾಣಿಸುತ್ತದೆ. ಮುಂಚೆ ಅಮ್ಮನವರು ಅಲ್ಲಿ ನೆಲೆಸಿದ್ದುದರಿಂದ ಅದನ್ನು ಹಳೆಯಮ್ಮನ ಘಟ್ಟ ಎನ್ನಲಾಗುತ್ತದೆ. ಸುಮಾರು 2000 ವರ್ಷಗಳಿಂದಲೂ ಅಲ್ಲಿ ಅಮ್ಮನವರಿಗೆ ಪೂಜೆ ನಡೆಯುತ್ತಿತ್ತು. ಜಾತ್ರೆಗಳು ಪೂಜೆ ನಡೆಯುತ್ತಿದ್ದುದಕ್ಕೆ ಈಗಲೂ ಅಲ್ಲಿ ಕುರುಹುಗಳನ್ನು ಕಾಣಬಹುದು.
ಒಂದು ದಿನ ಮುಟ್ಟಾದ ಹೆಂಗಸೊಬ್ಬರು ದೇವಸ್ಥಾನಕ್ಕೆ ಬಂದಿದ್ದರಿಂದ ಮೈಲಿಗೆಯಾಯಿತೆಂದು ಕೋಪಗೊಂಡ ಅಮ್ಮನವರು ರಾತ್ರೋರಾತ್ರಿ ಬೆಟ್ಟವಿಳಿದು ಕೆಳಗಿನ ಕೊಳದಲ್ಲಿ ಸ್ನಾನ ಮಾಡಿ ಎದುರಿಗಿದ್ದ ಈ ಕಲ್ಲಿನ ಬೆಟ್ಟ ಹತ್ತಿ ಬಂಡೆಯನ್ನು ಸೀಳಿ ಉದ್ಭವ ಮೂರ್ತಿಯಾಗಿ ಇಲ್ಲಿ ಕುಳಿತಿದ್ದಾರೆ ಎಂಬುದು ದೇವಸ್ಥಾನದ ಐತಿಹ್ಯವಾಗಿದೆ.
ಇಲ್ಲಿನ ಬೆಟ್ಟದ ಮೇಲೆ ಅಮ್ಮನವರು ರಥದಲ್ಲಿ ಬರುವಾಗ ಸೀಳಿದ ಬಂಡೆ ಪಾದದ ಗುರುತು ಶಾಪದಿಂದ ಕಲ್ಲಾದ ಪತಿಪತ್ನಿ ಮುಂತಾದವನ್ನು ಕಾಣಬಹುದು. ಅಲ್ಲದೆ ಅಮ್ಮನವರ ಪತಿ ಜಮದಗ್ನಿ ಋಷಿ ತಪಸ್ಸು ಮಾಡಿದ ಪುತ್ರ ಪರಶುರಾಮ ತಪಸ್ಸು ಮಾಡುತ್ತಿದ್ದ ಎನ್ನಲಾದ ಗುಹೆಗಳನ್ನು ಕಾಣಬಹುದು.
ಅಪಚಾರವಾದ್ರೆ ಏಳುವ ಜೇನು ಹುಳಗಳು

ಈಗಲೂ ದೇಗುಲಕ್ಕೆ ಏನಾದರೂ ಅಪಚಾರವಾದರೆ ನಂಬಿದವರು ನುಡಿದಂತೆ ನಡೆಯದಿದ್ದರೆ ಇಲ್ಲಿನ ಬಂಡೆಯ ಮೇಲೆ ಜೇನುಹುಳುಗಳು ಏಳುತ್ತವೆ ಎಂಬ ನಂಬಿಕೆಯಿದೆ. ಈ ದೇವಸ್ಥಾನಕ್ಕೆ ಸ್ವಂತ ಜಾಗವಿಲ್ಲ. ಎಲ್ಲವೂ ಭಕ್ತಗಣ ಕೊಟ್ಟ ಕಾಣಿಕೆಯಿಂದಲೇ ನಡೆಯುತ್ತದೆ. ಈಚಿನ ವರ್ಷಗಳಲ್ಲಿ ದೇವಸ್ಥಾನದವರೆಗೂ ರಸ್ತೆ ಹಾಗೂ ಅನ್ನದಾಸೋಹಕ್ಕೆ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಇದಲ್ಲದೆ ನಿತ್ಯ ಅನ್ನದಾನ ವೀಕ್ಷಣಾ ಗೋಪುರ ಸೇರಿದಂತೆ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಬೇಕಿದೆ. ಅವನ್ನೆಲ್ಲ ಅಮ್ಮನೇ ನೋಡಿಕೊಳ್ಳುತ್ತಾಳೆ ಎನ್ನುವುದು ಅರ್ಚಕ ಭಾಸ್ಕರ ಜೋಯಿಸ್ ಅವರ ನಂಬಿಕೆಯಾಗಿದೆ. ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಜಾತ್ರೆಗಳು ನಡೆಯುತ್ತವೆ. ಆಗ ಅನ್ನದಾಸೋಹ ಇರುತ್ತದೆ. ಅದು ಬಿಟ್ಟರೆ ಅಮ್ಮನವರ ನಿತ್ಯಪೂಜೆ ಸಾಂಗವಾಗಿ ನಡೆಯುತ್ತದೆ.
ಇಲ್ಲಿ ಅಮ್ಮ ಭಕ್ತರಿಗೆ ಬೇಕಾದುದನ್ನು ನೀಡಿ ತನಗೆ ಬೇಕಾದುದನ್ನು ಕೇಳಿ ಪಡೆಯುತ್ತಾಳೆ. ಈಚೆಗೆ ಒಮ್ಮೆ ಹೀಗಾಯಿತಂತೆ. ಅಮ್ಮನಿಗೆ ಅಲಂಕಾರ ಮಾಡುವಾಗ ಗೆಜ್ಜೆ ಇಲ್ಲ ಎಂದು ಕಂಡುಬಂತು. ಅಂದೇ ಶಿವಮೊಗ್ಗದ ಮಹಿಳೆಯೊಬ್ಬರು ಹೊಸ ಗೆಜ್ಜೆ ಖರೀದಿಸಿದ್ದರಂತೆ ಆಕೆಗೆ ರಾತ್ರಿ ಮಲಗಿದಾಗ ಸ್ವಪ್ನದಲ್ಲಿ ಬಂದ ಅಮ್ಮನವರು ನೀನು ಮಾತ್ರ ಹೊಸ ಗೆಜ್ಜೆ ತೆಗೆದುಕೊಂಡೆ ನನಗಿಲ್ಲವೇ ಎಂದು ಕೇಳಿದರಂತೆ.
ಮರುದಿನವೇ ಹೊಸಗೆಜ್ಜೆಯೊಂದಿಗೆ ದೇಗುಲಕ್ಕೆ ಓಡಿ ಬಂದ ಆಕೆ ಅಮ್ಮನಿಗೆ ಗೆಜ್ಜೆ ತೊಡಿಸಿದ್ದಾರೆ. ದೇವರಲ್ಲಿ ಶಕ್ತಿಯಿದೆನಮ್ಮಲ್ಲೇ ಭಕ್ತಿ ಕುಂದಿದೆ ಎಂದು ನೊಂದು ನುಡಿಯುತ್ತಾರೆ ಅಮ್ಮನ ಪವಾಡಗಳನ್ನು ವಿವರಿಸಿದ ಅರ್ಚಕ ಭಾಸ್ಕರ ಜೋಯಿಸ್ ರವರು ಹೇಳಿದ್ದಾರೆ.
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ವಿಶೇಷ
ಅಮ್ಮನಘಟ್ಟ ಗ್ರಾಮವು UTC 5.30 ಸಮಯ ವಲಯದಲ್ಲಿದೆ ಮತ್ತು ಇದು ಭಾರತೀಯ ಪ್ರಮಾಣಿತ ಸಮಯವನ್ನು ಅನುಸರಿಸುತ್ತದೆ. ಅಮ್ಮನಘಟ್ಟ ಸೂರ್ಯೋದಯ ಸಮಯವು IST ನಿಂದ 21 ನಿಮಿಷಗಳವರೆಗೆ ಬದಲಾಗುತ್ತದೆ.
ಅಮ್ಮನಘಟ್ಟದಲ್ಲಿ ವಾಹನ ಚಲಾಯಿಸುವ ಬದಿಯನ್ನು ಬಿಡಲಾಗಿದೆ, ಎಲ್ಲಾ ವಾಹನಗಳು ಚಾಲನೆ ಮಾಡುವಾಗ ಎಡಭಾಗದಲ್ಲಿ ತೆಗೆದುಕೊಳ್ಳಬೇಕು. ಅಮ್ಮನಘಟ್ಟ ಅಮ್ಮನ ಭಕ್ತರನ್ನು ಮಾತನಾಡಿಸಿದರೆ ವರ್ಷಗಳಿಂದ ಹೋಗದ ಚಿಮುಕಲು ಇಲ್ಲಿ ಭೇಟಿ ನೀಡಿದ ಮರುದಿನವೇ ಹೋದದ್ದು ಮಕ್ಕಳಾಗದವರಿಗೆ ಮಕ್ಕಳಾದದ್ದು ಮಗುವಿನ ಆರೋಗ್ಯ ಸಮಸ್ಯೆ ಮಾಯವಾದದ್ದು ಎಷ್ಟು ಕೊರೆದರೂ ನೀರು ಸಿಗದಿದ್ದ ಬೋರ್‌ವೆಲ್‌ನಲ್ಲಿ ಇಲ್ಲಿನ ಪ್ರಸಾದ ತೆಗೆದುಕೊಂಡು ಹಾಕಿದ ಬಳಿಕ ನೀರು ಬಂದಿದ್ದು ಸೇರಿದಂತೆ ನೂರಾರು ಕತೆಗಳಿವೆ.
ಭಕ್ತರಿಗೆ ಮಾತ್ರವಲ್ಲ ಚಾರಣಪ್ರಿಯರಿಗೂ ಮನ ತಣಿಸುವ ಸವಾಲಿನ ಹಾದಿ ಛಾಯಾಗ್ರಾಹಕರ ಕ್ಯಾಮೆರಾದ ಹೊಟ್ಟೆ ತುಂಬಿಸಬಲ್ಲ ಪ್ರಕೃತಿಯ ಸೊಬಗು ಇಲ್ಲಿದೆ.
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನವನ್ನು ತಲುಪುವುದು ಹೇಗೆ?
ಬಸ್ ಮೂಲಕ ತಲುಪಲು
ಶಿವಮೊಗ್ಗದಿಂದ ಹೊಸನಗರ ಹೋಗುವ ರೋಡಿನಲ್ಲಿ ಕೋಡೂರು ಹೋಬಳಿ ಸಿಗುತ್ತದೆ. ಅಲ್ಲಿಂದ ಬಲಬದಿಗೆ ಮೂರು 3 ಕಿ.ಮೀ. ಒಳರಸ್ತೆಯಲ್ಲಿ ಸಾಗಿದರೆ ಜೇನುಕಲ್ಲಮ್ಮ ದೇವಸ್ಥಾನ ಸಿಗುತ್ತದೆ.
ರೈಲು ಮೂಲಕ ತಲುಪಲು
ಅಮ್ಮನಘಟ್ಟಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಗುಬ್ಬಿ ಇದು 3.3 ಕಿಲೋಮೀಟರ್ ದೂರದಲ್ಲಿದೆ. ಕೆಳಗಿನ ಕೋಷ್ಟಕವು ಇತರ ರೈಲು ನಿಲ್ದಾಣಗಳನ್ನು ಮತ್ತು ಮಾಮಕುಡಿಯಿಂದ ಅದರ ದೂರವನ್ನು ತೋರಿಸುತ್ತದೆ.
ವಿಮಾನದ ಮೂಲಕ ತಲುಪಲು
ಅಮ್ಮನಘಟ್ಟದ ಹತ್ತಿರದ ವಿಮಾನ ನಿಲ್ದಾಣವು ಜಕ್ಕೂರ್ ಏರ್‌ಫೀಲ್ಡ್ 79.4 ಕಿಮೀ ದೂರದಲ್ಲಿದೆ. ಅಮ್ಮನಘಟ್ಟದ ಸುತ್ತಮುತ್ತಲಿನ ಇನ್ನೂ ಕೆಲವು ವಿಮಾನ ನಿಲ್ದಾಣಗಳಲ್ಲಿ ತಲುಪಬಹುದು.
FAQ
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ಏಲ್ಲಿದೆ ?
ಶಿವಮೊಗ್ಗದಿಂದ ಹೊಸನಗರ ಹೋಗುವ ರೋಡಿನಲ್ಲಿ ಕೋಡೂರು ಹೋಬಳಿ ಸಿಗುತ್ತದೆ. ಅಲ್ಲಿಂದ ಬಲಬದಿಗೆ ಮೂರು 3 ಕಿ.ಮೀ. ಒಳರಸ್ತೆಯಲ್ಲಿ ಸಾಗಿದರೆ ಜೇನುಕಲ್ಲಮ್ಮ ದೇವಸ್ಥಾನ ಸಿಗುತ್ತದೆ.
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ವಿಶೇಷತೆ ಏನು?
ಜನರ ವಿವಿಧ ಕಾಯಿಲೆಗಳಿಗೂ ದೇವಿಯ ಅನುಗ್ರಹವೇ ಸಿದ್ಧೌಷದ ಎಂದರೆ ಹೆಚ್ಚುಗಾರಿಕೆಯೇನಲ್ಲ. ಕಜ್ಜಿ ಕುರಗಳಂತಹ ಸಾಮಾನ್ಯ ರೋಗಗಳಿಂದ ಹಿಡಿದು ಇಂದಿನ ಆಧುನಿಕ ಪ್ರಾಣಾಹಾರಕ ಪೀಡೆಗಳೂ ಸಹಾ ಈ ಅಮ್ಮನ ಆಶೀರ್ವಾದ ಬಲದಿಂದ ಹೋಗುತ್ತದೆ.
ಇತರ ಪ್ರವಾಸಿ ಸ್ಥಳಗಳು
-
Jobs7 months ago
ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ನೇಮಕಾತಿ ಕರ್ನಾಟಕ 2022 | Forest Department Recruitment Karnataka 2022
-
Information8 months ago
ರೈತರಿಗೆ ಸಿಹಿಸುದ್ದಿ ! ರೂ 1,25,000 ಬೃಹತ್ ಸಹಾಯಧನ ಪಡೆದುಕೊಳ್ಳಿ
-
Information8 months ago
ರೈತರ ಖಾತೆಗೆ ನೇರವಾಗಿ ಹಣ ಜಮಾ 25000 ರಿಂದ 28000 ರೂ ಬೆಳೆಹಾನಿ ಪರಿಹಾರ ವಿವರ
-
Scholarship8 months ago
ವಿದ್ಯಾರ್ಥಿಗಳಿಗೆ ರೂ 10,000 ರಿಂದ 35000 ವರೆಗೆ ಪ್ರೋತ್ಸಾಹ ಧನ – ಪ್ರೈಜ್ ಮನಿ ವಿದ್ಯಾರ್ಥಿವೇತನ 2022
-
Scholarship8 months ago
ರೂ 15,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ…! ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
-
Scholarship8 months ago
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ6000 ರೂ ವರೆಗೆ ವಿದ್ಯಾರ್ಥಿವೇತನ..! ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿವೇತನ 2022
-
Govt Schemes8 months ago
ರೈತರ ಮಕ್ಕಳಿಗೆ 2,000 ದಿಂದ 11,000 ವರೆಗೆ ವಿದ್ಯಾರ್ಥಿವೇತನ – ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ 2022
-
Govt Schemes8 months ago
ಸ್ವಯಂ ಉದ್ಯೋಗಕ್ಕಾಗಿ 3.5 ಲಕ್ಷ ಉಚಿತ ಸಬ್ಸಿಡಿ ಸಿಗುತ್ತೆ ! ಇಂದೇ ಅರ್ಜಿ ಸಲ್ಲಿಸಿ